ನಿನ್ನ ವನ , ನಿನದಲ್ಲವೇ ನೆಲವು ?
ನೀನಲ್ಲವೇ ಬಾನು, ಜೀವ ತಣಿಸುವಾ ಗಂಗಾ ಜಲವು!
ನಾನು ನನದೆಂಬ ಈ ಕಿತ್ತಾಟಗಳ ನಡುವೆ,
ಮರೆತು ನಿಂತಿದೆ ನಿನ್ನ, ಈ ಮೂಢ ಮನವು!
ನಿನ್ನ ಧ್ಯಾನವ ತೊರೆದು, ಮತಿಗೆಡುವ ಮೂಢ ಜನ,
ಸತ್ಯಕ್ಕೆ ಬೇಕಿನ್ನೂ ಇದಕಿಂತ ಅವಮಾನ ?
ಸಂತೆಯಿದು ಎಂತಹದೋ? ಎಂತಹದಿದು ಕಥೆಯೋ?
ನಗು ಬರುವ ಹಾಗೆ ಇದೆ, ಇದು ಎಂತಹಾ ವ್ಯಥೆಯೋ?
ನೀನು ಸೃಷ್ಟಿಸಿದ ಈ ಲೋಕ , ನಿನಗೇ ಇಲ್ಲವಂತೆ,
ಯಾರದೆಂದು ಬಗೆ ಹರಿಸು, ಬಂದಿಹೆಯಲ್ಲ ಎನ್ನ ತಂದೆ!
ನೀನಲ್ಲವೇ ಬಾನು, ಜೀವ ತಣಿಸುವಾ ಗಂಗಾ ಜಲವು!
ನಾನು ನನದೆಂಬ ಈ ಕಿತ್ತಾಟಗಳ ನಡುವೆ,
ಮರೆತು ನಿಂತಿದೆ ನಿನ್ನ, ಈ ಮೂಢ ಮನವು!
ನಿನ್ನ ಧ್ಯಾನವ ತೊರೆದು, ಮತಿಗೆಡುವ ಮೂಢ ಜನ,
ಸತ್ಯಕ್ಕೆ ಬೇಕಿನ್ನೂ ಇದಕಿಂತ ಅವಮಾನ ?
ಸಂತೆಯಿದು ಎಂತಹದೋ? ಎಂತಹದಿದು ಕಥೆಯೋ?
ನಗು ಬರುವ ಹಾಗೆ ಇದೆ, ಇದು ಎಂತಹಾ ವ್ಯಥೆಯೋ?
ನೀನು ಸೃಷ್ಟಿಸಿದ ಈ ಲೋಕ , ನಿನಗೇ ಇಲ್ಲವಂತೆ,
ಯಾರದೆಂದು ಬಗೆ ಹರಿಸು, ಬಂದಿಹೆಯಲ್ಲ ಎನ್ನ ತಂದೆ!