Sunday, February 26, 2017

ಯಾರ ನೆಲ, ಯಾರ ಬನ ? ಪರಶಿವನೇ ಹೇಳು

ನಿನ್ನ ವನ , ನಿನದಲ್ಲವೇ ನೆಲವು ?
ನೀನಲ್ಲವೇ  ಬಾನು, ಜೀವ ತಣಿಸುವಾ ಗಂಗಾ ಜಲವು!

ನಾನು ನನದೆಂಬ ಈ ಕಿತ್ತಾಟಗಳ  ನಡುವೆ,
 ಮರೆತು ನಿಂತಿದೆ ನಿನ್ನ, ಈ ಮೂಢ ಮನವು!

ನಿನ್ನ ಧ್ಯಾನವ ತೊರೆದು, ಮತಿಗೆಡುವ ಮೂಢ ಜನ,
ಸತ್ಯಕ್ಕೆ ಬೇಕಿನ್ನೂ ಇದಕಿಂತ  ಅವಮಾನ ?

 ಸಂತೆಯಿದು  ಎಂತಹದೋ? ಎಂತಹದಿದು ಕಥೆಯೋ?
ನಗು ಬರುವ ಹಾಗೆ ಇದೆ, ಇದು ಎಂತಹಾ ವ್ಯಥೆಯೋ?

ನೀನು ಸೃಷ್ಟಿಸಿದ ಈ ಲೋಕ , ನಿನಗೇ ಇಲ್ಲವಂತೆ,
ಯಾರದೆಂದು ಬಗೆ ಹರಿಸು, ಬಂದಿಹೆಯಲ್ಲ  ಎನ್ನ  ತಂದೆ!











No comments: